ಬಾಂಗ್ಲಾದೇಶ ಫ್ರೀಡಂ ಆನರ್ ( ಬಾಂಗ್ಲಾದೇಶೇ ಸಾಬಿದೀನನಾ ಸಮ್ಮಾನನಾ) ಬಾಂಗ್ಲಾದೇಶ ಸರ್ಕಾರವು ನೀಡುವ ಉನ್ನತ ರಾಜ್ಯ ಪ್ರಶಸ್ತಿಯಾಗಿದೆ. ಇದನ್ನು ವಿದೇಶಿಗರಿಗೆ ನೀಡಲಾಗುತ್ತದೆ. 2011 ರ ಜುಲೈ 25 ರಂದು ಭಾರತೀಯ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಮರಣೋತ್ತರವಾಗಿ ನೀಡಲಾಯಿತು. ಬಾಂಗ್ಲಾದೇಶ ಸ್ವಾತಂತ್ರ್ಯದ ಯುದ್ಧದ ಸಮಯದಲ್ಲಿ ಮಿತ್ರರಾಷ್ಟ್ರದ ಪಾತ್ರವನ್ನು ,ಮತ್ತು ಇಂತಹ ಸಂಕೀರ್ಣವಾದ ಪ್ರಾದೇಶಿಕ ಯುದ್ಧವನ್ನು ನಿರ್ವಹಿಸುವ ಅವರ ಸಾಮರ್ಥ್ಯ ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ , ಇಂದಿರಾ ಗಾಂಧಿಯವರ ಸೊಸೆ ಸೋನಿಯಾ ಗಾಂಧಿಯವರಿಗೆ ಬಾಂಗ್ಲಾದೇಶದ ಅಧ್ಯಕ್ಷ ಜಿಲ್ಲೂರ್ ರಹಮಾನ್ ಅವರು ಢಾಕಾದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿದರು ಈ ಪ್ರಶಸ್ತಿಯು ಮೂರು ಕಿಲೋಗ್ರಾಮ್ ತೂಕವಿರುವ ಒಂದು ಕ್ರೆಸ್ಟ್ನ್ನು ಒಳಗೊಂಡಿದ್ದು, 400 ವರ್ಷ ಹಳೆಯ ಟೆರಾಕೋಟಾದ 'ಕದಮ್ ಮರದ ಮೇಲೆ ಚಿನ್ನದಿಂದ ತಯಾರಿಸಿದ ಒಂದು ಉಲ್ಲೇಖವಿದೆ “. . . . . ' .” == ಉಲ್ಲೇಖ ==